Tuesday, 8 January 2013

ಸಂಜೆ

ದೂರದಂಚಿನಲಿ ಭಾನುವಿನ ಅಸ್ತಿತ್ವದ ಯುದ್ಧಕೆ,


ಅವನಗಲಿಕೆಯಿಂದಾದ ಭೂಮಿಯ ತಳಮಳಕೆ,


ಸಾಕ್ಷಿಯಾಯಿತು ಮೇಘದ ಪಯಣ,


ಆ ಮಿಲನದ ಗುರ್ತಿಗೆ ಸಂಜೆಯ ಹೊಂಗಿರಣ.




ನಿನ್ನ ಕಂಗಳಿಂದ ತೋರಿಸೆನಗೆ ಜಗದ ಬೆರಗು,


ಕೊಡು ಎನಗೆ ನಿನ್ನ ಶಬ್ದದ ಧ್ವನಿ,


ನನ್ನ ನಡಿಗೆಗೆ ದಾರಿ ನೀನಾಗು,


ಆವರಿಸಿ ಮನದ ತುಂಬಾ, ನಾನಾಗು


ಆಗಿರುವೆ ನೀನಾಗಲೇ ನಾನು!